ಇತಿಹಾಸ ದರ್ಪಣ

ಆರಂಭ…

ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ (2002-2007ರವರೆಗಿನ) ಹಿರಿಯ ಕಿರಿಯ ಗೆಳೆಯರೆಲ್ಲ ಸೇರಿ 2008ರಲ್ಲಿ ‘ಸ್ಪಂದನ ಇತಿಹಾಸ ವೇದಿಕೆ’ ಎಂಬ ವೇದಿಕೆಯೊಂದನ್ನು ರೂಪಿಸಿಕೊಂಡರು. ಈ ವೇದಿಕೆಯ ಮೂಲಕ ಅಕಾಡೆಮಿಕ್ ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಈ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಇತಿಹಾಸ ದರ್ಪಣ’ ತ್ರೈಮಾಸಿಕ ಪತ್ರಿಕೆಯ ಪ್ರಾಯೋಗಿಕ ಸಂಚಿಕೆಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿ ಅವರು ಬಿಡುಗಡೆ ಮಾಡಿದರು. ಕಾರಣಾಂತರಗಳಿಂದ ವೇದಿಕೆ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿತಾದರೂ, ‘ಇತಿಹಾಸ ದರ್ಪಣ’ವು ಹಂ.ಗು.ರಾಜೇಶ್ ಅವರ ಸಂಪಾದಕತ್ವದಲ್ಲಿ ನಿರಂತರವಾಗಿ ಹೊರಬರಲಾರಂಭಿಸಿತು. ಅಂದು ಕನ್ನಡದಲ್ಲಿ ‘ಚರಿತ್ರೆ ಅಧ್ಯಯನ’ ಹೊರತುಪಡಿಸಿದರೆ ಇತಿಹಾಸ ಸಂಶೋಧನೆಗಾಗಿ ಮೀಸಲಾಗಿದ್ದ ಬೇರೆ ನಿಯತಕಾಲಿಕೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಈ ಒಂದು ಕೊರತೆಯನ್ನು ಸ್ವಲ್ಪಮಟ್ಟಿಗಾದರೂ ನೀಗಿಸುವ ದೃಷ್ಟಿಯಿಂದ ‘ಇತಿಹಾಸ ದರ್ಪಣ’ ಆರಂಭವಾಯಿತು. ಆರಂಭದಲ್ಲಿ ವಿದ್ಯಾರ್ಥಿ ಕೇಂದ್ರಿತವಾಗಿ ಹೊರಬರುತ್ತಿದ್ದ ‘ಇತಿಹಾಸ ದರ್ಪಣ’ವು ನಿಧಾನವಾಗಿ ವಿಕಾಸ ಹೊಂದುತ್ತಾ ಸಾಗಿತು. ಇಂದು ಕನ್ನಡ ನಾಡಿನ ವಿದ್ವತ್ ಲೋಕದ ಗಮನಸೆಳೆಯುವಲ್ಲಿ ಯಶಸ್ವಿ ಕೂಡ ಆಗಿದೆ.

ಸಾಗಿಬಂದ ದಾರಿ

ಕಳೆದ ಹತ್ತು ವರ್ಷಗಳಲ್ಲಿ ಇತಿಹಾಸ ದರ್ಪಣವು 47 ಪುಸ್ತಕ(ಸಂಚಿಕೆ)ಗಳನ್ನು ಕಂಡಿದೆ. ಈವರೆಗೆ ನಾಡು, ಹೊರನಾಡು ಮತ್ತು ವಿದೇಶಗಳಲ್ಲಿನ 150ಕ್ಕೂ ಹೆಚ್ಚು ವಿದ್ವಾಂಸರ 450ಕ್ಕೂ ಹೆಚ್ಚು ವಿದ್ವತ್‍ಪೂರ್ಣ ಲೇಖನಗಳನ್ನು ಇತಿಹಾಸ ದರ್ಪಣ ಪ್ರಕಟಿಸಿದೆ. ಈವರೆಗೆ ಹೊರಬಂದಿರುವ 47 ಪುಸ್ತಕಗಳಲ್ಲಿ 7ನ್ನು ವಿಶೇಷ ಸಂಚಿಕೆಗಳನ್ನಾಗಿ ರೂಪಿಸಲಾಗಿದೆ.

ವಿಶೇಷ ಸಂಚಿಕೆಗಳು

  • 2010ರಲ್ಲಿ ಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ವರ್ಷಾಚರಣೆಯ ಪ್ರಯುಕ್ತ ‘ಕೃಷ್ಣ(ದೇವ)ರಾಯ ಮತ್ತು ವಿಜಯನಗರ ಸಾಮ್ರಾಜ್ಯ’ ಎಂಬ 120 ಪುಟಗಳ ವಿಶೇಷ ಸಂಚಿಕೆಯನ್ನು ಅ.ಲ.ನರಸಿಂಹನ್ ಅವರ ಗೌರವ ಸಂಪಾದಕತ್ವದಲ್ಲಿ ರೂಪಿಸಲಾಗಿದೆ.
  • ಬೆಂಗಳೂರು ಸ್ಥಾಪನೆಗೊಂಡ 475ನೇ ವರ್ಷದ ಸಂದರ್ಭದಲ್ಲಿ ಎಸ್.ಕೆ. ಅರುಣಿ ಅವರ ಸಂಪಾದಕತ್ವದಲ್ಲಿ ‘ನಮ್ಮ ಬೆಂಗಳೂರು’ ಎಂಬ ವಿಶೇಷ ಸಂಚಿಕೆಯನ್ನು ರೂಪಿಸಲಾಗಿದೆ.
  • ಭಾರತೀಯ ಪುರಾತತ್ತ್ವ ಸವೇಕ್ಷಣಾ ಇಲಾಖೆಯು ಸ್ಥಾಪನೆಗೊಂಡು 150 ವರ್ಷಗಳು ಸಂದ ಸುಸಂದರ್ಭದಲ್ಲಿ ಎಸ್.ಕೆ. ಅರುಣಿ ಮತ್ತು ಹಂ.ಗು. ರಾಜೇಶ್ ಅವರ ಸಂಪಾದಕತ್ವದಲ್ಲಿ ‘ಕರ್ನಾಟಕದಲ್ಲಿ ಪುರಾತತ್ವ ಅಧ್ಯಯನಗಳು’ ಎಂಬ ವಿಶೇಷ ಸಂಚಿಕೆಯನ್ನು ರೂಪಿಸಲಾಗಿದೆ.
  • ಇತಿಹಾಸ ದರ್ಪಣದ 25ನೇ ಸಂಚಿಕೆಯನ್ನು ಒಂದು ಆಕರಗ್ರಂಥವಾಗಿ ರೂಪಿಸುವ ದೃಷ್ಟಿಯಿಂದ ‘ಹೈದರಾಲಿ ಮತ್ತು ತೀಪೂ ಸುಲ್ತಾನರಿಗೆ ಸಂಬಂಧಿತ ದಾಖಲೆ’ ಎಂಬ ಬೆಳ್ಳಿ ಪುಸ್ತಕವನ್ನು ಮನು ವಿ. ದೇವದೇವನ್ ಅವರು ಸಂಪಾದಿಸಿದರು.
  • ‘ಇತಿಹಾಸ ದರ್ಪಣ’ದ ಮೂಲ ಪ್ರೇರಕ ಶಕ್ತಿಯಾದ ಎಸ್.ಕೆ. ಅರುಣಿ ಅವರಿಗೆ 50 ತುಂಬಿದ ಸಂದರ್ಭದಲ್ಲಿ ‘ಪರಿಶೋಧ: ಕರ್ನಾಟಕದ ಕಲೆ, ವಾಸ್ತುಶಿಲ್ಪ ಮತ್ತು ಪುರಾತತ್ತ್ವ ಕುರಿತಾದ ಹೊಸ ಶೋಧನೆಗಳು’ ಎಂಬವಿಶೇಷ ಸಂಚಿಕೆಯನ್ನು ಹೊರತರಲಾಯಿತು.
  • ‘ಇತಿಹಾಸ ದರ್ಪಣ’ದ  10ನೇ ವಸಂತದ ಸವಿ ನೆನಪಿಗಾಗಿ ಕರ್ನಾಟಕ ಇತಿಹಾಸದ ಹೊಸ ಅಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ಕರ್ನಾಟಕ ಇತಿಹಾಸದ ಹೊಸ ಆಯಾಮಗಳು” ಎಂಬ ಶೀರ್ಷಿಕೆಯಡಿ ವಿಶೇಷ ಸಂಚಿಕೆಯನ್ನು ಹೊರತರಲಾಯಿತು. 

ವೈಶಿಷ್ಟ್ಯತೆ

  • UGC CARE ಲಿಸ್ಟ್ ನಿಯತಕಾಲಿಕೆ.
  • ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಹೊರಬರುತ್ತಿರುವ ಕನ್ನಡದ ಇತಿಹಾಸ ಸಂಶೋಧನಾ ನಿಯತಕಾಲಿಕೆ.
  • ಅಕಾಡೆಮಿಕ್ ವಲಯದ ಸಂಶೋಧಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ISSN N: 2321-3590 ಸಂಖ್ಯೆಯನ್ನು ಹೊಂದಿದೆ.
  • ಹೊಸ ತಲೆಮಾರಿನ ಸಂಶೋಧಕರಿಗೆ ಹೊತ್ತಾಸೆಯಾಗಿದೆ.

ಇತಿಹಾಸ ದರ್ಪಣ ನಿಯತಕಾಲಿಕೆಯ ಸಂಪಾದಕ ಮಂಡಳಿ

* ಪೃಥ್ವಿದತ್ತ ಚಂದ್ರ ಶೋಭಿ, ಇತಿಹಾಸ ಸಹ ಪ್ರಾಧ್ಯಾಪಕರು, ಕ್ರಿಯಾ ವಿಶ್ವವಿದ್ಯಾಲಯ, ಶ್ರೀಸಿಟಿ, ಆಂಧ್ರಪ್ರದೇಶ.
* ಮನು ವಿ. ದೇವದೇವನ್, ಸಹ ಪ್ರಾಧ್ಯಾಪಕರು, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗ, ಐ .ಐ .ಟಿ, ಮಂಡಿ, ಹಿಮಾಚಲ ಪ್ರದೇಶ.
* ವಿ. ಶೋಭ, ಸಹ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು
* ಎ. ಬಿ. ವಗ್ಗರ, ಇತಿಹಾಸ ಸಹ ಪ್ರಾಧ್ಯಾಪಕರು, ಶ್ರೀ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ನರಗುಂದ, ಗದಗ ಜಿಲ್ಲೆ
* ಮೋಹನ ಆರ್., ಪೋಸ್ಟ್ ಡಾಕ್ಟೋರಲ್ ಫೆಲೋ, ಡೆಕ್ಕನ್ ಕಾಲೇಜು, ಪುಣೆ
* ಪ್ರದೀಪ್ ಕುಮಾರ್ ಶೆಟ್ಟಿ ಕೆ., ಉಪನ್ಯಾಸಕರು, ಸ.ಪ.ಪೂ ಕಾಲೇಜು, ಬೈಂದೂರು, ಉಡುಪಿ ಜಿಲ್ಲೆ

ಸಲಹಾ ಸಮಿತಿ

* ರವಿ ಕೋರಿಶೆಟ್ಟರ್, ಹಿರಿಯ ಪುರಾತತ್ವ ಶಾಸ್ತ್ರಜ್ಞರು, ಧಾರವಾಡ.
* ಎಂ. ಜಮುನ, ಹಿರಿಯ ಇತಿಹಾಸಕಾರರು, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
* ವಿಜಯ್ ಪೂಣಚ್ಚ ತಂಬಂಡ, ಚರಿತ್ರೆ ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬಳ್ಳಾರಿ ಜಿಲ್ಲೆ
* ರಹಮತ್ ತರೀಕೆರೆ, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬಳ್ಳಾರಿ ಜಿಲ್ಲೆ
* ಎಸ್.ಕೆ.ಅರುಣಿ, ಪ್ರಾದೇಶಿಕ ನಿರ್ದೇಶಕರು, ಐ. ಸಿ .ಎಚ್ .ಆರ್. , ಬೆಂಗಳೂರು.

ಕೆಲವು ಇತಿಹಾಸ ದರ್ಪಣ ಸಂಚಿಕೆಗಳು

ಕೆಲವು ಸಂಚಿಕೆಗಳು PDF ನಲ್ಲಿ ಲಭ್ಯವಿವೆ. ಕೆಳಗಿನ ಕೊಂಡಿಗಳನ್ನು ಒತ್ತಿ ಓದಬಹುದು.

ಇತಿಹಾಸ ದರ್ಪಣ ಪ್ರಾಯೋಗಿಕ ಸಂಚಿಕೆ – ೨೦೦೮

ಇತಿಹಾಸ ದರ್ಪಣ ಸಂಚಿಕೆ 17

ಇತಿಹಾಸ ದರ್ಪಣ ಸಂಚಿಕೆ 18

ಇತಿಹಾಸ ದರ್ಪಣ ಸಂಚಿಕೆ 20

ಇತಿಹಾಸ ದರ್ಪಣ ಸಂಚಿಕೆ 21-22

ಇತಿಹಾಸ ದರ್ಪಣ ಸಂಚಿಕೆ 26

ಇತಿಹಾಸ ದರ್ಪಣ ಸಂಚಿಕೆ 27

ಇತಿಹಾಸ ದರ್ಪಣ ಸಂಚಿಕೆ 28

ಇತಿಹಾಸ ದರ್ಪಣ ಸಂಚಿಕೆ 29

ಇತಿಹಾಸ ದರ್ಪಣ ಸಂಚಿಕೆ 44-45

ಇತಿಹಾಸ ದರ್ಪಣ ಸಂಚಿಕೆ 46-47

ಹಿಂದಿನ ಕೆಲವು ಸಂಚಿಕೆಗಳ ಪರಿವಿಡಿ

ಚಿತ್ರಗಳ ಮೇಲೆ ಕ್ಲಿಕ್ ಮಾಡಿ ವೀಕ್ಷಿಸಬಹುದು